
ಮೌನ ಮಾತು
ತುಸು ಸುಮ್ಮನೆ ಏಕೆ ಕುಳಿತೆ ತರುಣಿ.
ಮೌನ ಭಾವದ ಬಯಕೆಗಳ ವ್ಯಕ್ತಪಡಿಸಿದ ಭಾಮಿನಿ.
ನಿತ್ಯದ ಬದುಕಲ್ಲಿ ಶೃಂಗಾರ ತಂದ ನೀ ಪಾಲ್ಗುಣಿ.
ಸಾಗಲಿ ಬದುಕು ಪ್ರೇಮ ಮಧುರವಾಣಿ !!
ನಿನ್ನ ಸುಂದರ ನಯನಗಳು..
ನೋಡಲೆಂದೆ ನಿಂತ ಆ ಕ್ಷಣಗಳು
ಬಯಕೆ ಕಾಡುತ್ತಿದೆ ಬೇಡುತ್ತಿದೆ
ಕದ ತಟ್ಟಿದೆ ಮನ ಮುಟ್ಟಿದೆ….
ಯೌವನ ತುಂಬಿದ ಚಕೋರಿ ಸ್ಪರ್ಶಿಸಲು…!
ಮನಮೋಹಕ ಶೃಂಗಾರ ಕಾದರಿಸಿ
ಮೌನವಾಗಿ ಏಕೆ ಕುಳಿತೆ ಬಯಸಿ
ಯೌವ್ವನ ತುಂಬಿ ಕನ್ನಿಕೆ… ನೀ.
ಕಂಗಳಿಸುವೆ ನಯನಗಳು
ಹೃದಯ ಬೇಡಿಕೆ ಇತ್ತ ನೀ ಪೋರಿ.
ಕಣ್ಣಂಚಲೇ ಕರೆದು ಶೃಂಗರಿಸಿದೆ
ಮಧು ಚಂದ್ರಿಕೆ…
ನೀ ನನ್ನ ಮಧುರವಾಣಿ…
ಸಾಂಸಾರಿಕ ತರುಣಿ !!!
ಎಸ್. ಪಟೇಲ್
ಸಂಪಾದಕ, ಪತ್ರಕರ್ತ.
ಬೆಂಗಳೂರು.
ರಚನೆ: 26/7/24.

ಆರೋಗ್ಯವಂತ ಮನಸ್ಸಿನ ಭಾವನೆಯು ಇಲ್ಲಿ ಕವಿತೆಯಾಗಿದೆ. ಹದವಾದ ಮೃದುಕೋಶವು ಪದಗಳಲ್ಲಿ ಅರಳುವಾಗ ಮೌನದ ಆಪ್ತತೆ ಮೂಡಿದೆ. ಕಾಣುವ ನೋಟ ಮಾತನಾಡುತ್ತದೆ. ಅನುಭವಿಸುವ ಮನಸ್ಸು ಪದವಾಗುತ್ತದೆ. ಆ ಪದವು ಅಕ್ಷರವಾಗಿ ಅನಂತ ಸಾಕ್ಷಿಗಳನ್ನು ಪ್ರೇಮ ಸಂವೇದನೆಯಲ್ಲಿ ನಮ್ಮ ಎಸ್. ಪಟೇಲ್ರು, ಸಂಪಾದಕ, ಪತ್ರಕರ್ತ ರಾಗಿ ನಿತ್ಯವೂ ಸ್ಫುಟಿಸಲಿ. ಈ ಸಮಾಜವು ನೋವುಗಳ ನಡುವೆಯೂ ಆರೋಗ್ಯವಾಗಲೆಂದು ಹಾರೈಕೆ.
ಡಾ. ರವಿಶಂಕರ್ ಎ.ಕೆ
ಪ್ರಾಧ್ಯಾಪಕರು. ಕನ್ನಡ ವಿಭಾಗ
ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು

