! ಜಲಧಾರೆ !
ಜುಳು ಜುಳು ನಾದದ ಜಲಧಾರೆ
ಝೇಂಕರಿಸುವ ಸಿರಿಮನ ತಾರೆ
ಜಲ ಚರ ನಿತ್ಯಹಾರೆ
ಧರೆ ತಳದ ಹೊರ ಹರಿಯುವ ನೀರೆ
ಮನುಜ ಮನದಿ
ಕೂಳೆ ತೆಗೆಯುವ ಜಲಧಾರೆ ಪುಣ್ಯದಾರೆ !
ಜರಿಯಾಗಿ ಹರಿವ ನೀನು
ನಿತ್ಯವು ಕಂಪಿಸಿ
ಅಡವಿಯೊಳ್ ಕೊಂಕಿಸಿ
ನಿತ್ಯ ಬಿಳಿಯ ಕಿರುನೀರೆ
ಕಂಠವ ನೆನಸಿ ದಣಿವನು ನೀಗಿಸಿ
ಹಸಿರನು ಬಯಸಿ,ಬಯಸಿ
ಕಣ್ ಮನ ತಣಿಸಲು
ಹೊಳೆದಿಹ ಮನದೊಳು ಸೂರೆ
ನಿನ್ನ ನೋಡಿ ಬರೆದ ಈ ಸಾಲು
ಜಲಧಾರೆ ಪುಣ್ಯಧಾರೆ !!
ಎಸ್.ಪಟೇಲ್
ಸಂಪಾದಕರು, ಪತ್ರಕರ್ತ
ಬೆಂಗಳೂರು.
ರಚನೆ: 2001

All copy Rights Reserved @ Praja Samaya News,Kannada.

All copy Rights Reserved @ Praja Samaya News,Kannada.


