ಭಕ್ತಿ-ಭರವಸೆ
ಶಿವಂಗೆ ಭಕ್ತಿ ನೀರೆರಸಿ,
ಚಿಗುರು ಬಿಲ್ವ ಪತ್ರೆ ಅರ್ಪಿಸಿ
ಹೊಸ ಬದುಕಿನ ದಾರಿಗೆ ಹರಸಿ
ಸಾವಿರ ಭರವಸೆ ನಿಂಗೆ ಸಮರ್ಪಿಸಿ
ಕಾಯೋ ದೇವ ನೀ !!
ಪರರ ಹಂಗಿಲ್ಲದೆ
ಸೇವೆ ಸಾಗಲಿದೆ
ಸತ್ಕಾರ್ಯ ಕರುಣಿಸೋ ಒಡೆಯ
ಪಾಪ-ಪುಣ್ಯಗಳ ಮನ್ನಿಸಿ
ನನ್ನೆಲ್ಲ ಕನಸುಗಳನ್ನು ಮುನ್ನಡೆಸಿ
ಕಾಯೋ ದೇವ ನೀ !!
ಹಾಡುವ ಬಾಯಿಗೆ
ಕೇಳುವ ಕೀವಿಗೆ
ಬದುಕು ಹೋಗದಿರಲ್ಲಿ- ಬಾಡದಿರಲ್ಲಿ
ಶುದ್ಧ ಸತ್ಯ ಎದೆಯಲ್ಲಿ ಬದುಕು ಸಾಗಲಿ
ಕೊಟ್ಟ ಮಾತಿಗೆ ಸಪ್ತಪದಿ ತುಳಿದ ಬಾಳಿಗೆ
ಸಾಂಸಾರ-ಸಂಸ್ಕಾರ ರೂಪಿಣಿಯಾಗಿರುವೆ…!
ಕಾಯೋ ದೇವ ನೀ !!
ಎಸ್,ಪಟೇಲ್
ಸಂಪಾದಕ, ಪತ್ರಕರ್ತ
ಬೆಂಗಳೂರು.
ರಚನೆ:28/07/24

All copy Rights Reserved @ Praja Samaya News,Kannada.

All copy Rights Reserved @ Praja Samaya News,Kannada.


